Yash Busy In Movie Shoot ,Definitely He will Come to Our Maja House Says,, Srujan Lokesh
ಕನ್ನಡ ಕಿರುತೆರೆಯ ‘ಮಜಾ ಟಾಕೀಸ್’ ಸೂಪರ್ ಹಿಟ್ ಶೋ. ಕೆಲ ದಿನಗಳ ಹಿಂದೆ ಮಜಾ ಟಾಕೀಸ್ ಮನೆಗೆ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಎಂಟ್ರಿ ಕೊಟ್ಟಿದ್ದರು. ಆದರೆ, ನಟ ಯಶ್ ಮಾತ್ರ ಇನ್ನೂ ಒಂದು ಬಾರಿಯೂ ಮಜಾ ಮನೆಯಲ್ಲಿ ಕಾಣಿಸಿಕೊಂಡಿಲ್ಲ.
ಸ್ಟಾರ್ ನಟರಾದ, ಶಿವಣ್ಣ, ಉಪೇಂದ್ರ, ದರ್ಶನ್, ಸುದೀಪ್ ಕೂಡ ಹಾಜರಾಗಿದ್ದರು. ಆದರೆ ರಾಕಿಂಗ್ ಸ್ಟಾರ್ ಯಶ್ ಮಾತ್ರ ಇನ್ನೂ ಆ ಮನೆಯಲ್ಲಿ ಕಾಣಿಸಿಕೊಂಡಿಲ್ಲ. ಅಭಿಮಾನಿಗಳು ಸದಾ ಸೃಜನ್ ಗೆ ಕೇಳ್ತಾರಂತೆ. ಯಾಕೆ ನೀವು ಯಶ್ ಅವರನ್ನು ಕರೆಯೋದಿಲ್ಲ ಅಂತ.
ಅದಕ್ಕೆ ಸೃಜನ್ ಉತ್ತರ ಕೊಟ್ಟಿದ್ದಾರೆ. ಯಶ್ ಅವರನ್ನು ಕಡಿಮೆ ಅಂದರೂ 5 ಬಾರಿ ಮನೆಗೆ ಆಹ್ವಾನ ನೀಡಿದ್ದಾರಂತೆ. ಆದರೆ, ಯಶ್ ತಮ್ಮ ಮದುವೆ, ರಿಸಪ್ಷನ್, ಕೆಜಿಎಫ್ ಶೂಟಿಂಗ್, ಯಶೋಮಾರ್ಗ ಅಂತ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಸ್ಟಾರ್ ನಟ ಅಂದ ಮೇಲೆ ಸದಾ ಅವರು ಬ್ಯುಸಿ ಇರ್ತಾರೆ. ಹಾಗಾಗಿ ಅವರು ಫ್ರೀ ಆದಾಗ ಖಂಡಿತ ಮಜಾ ಮನೆಗೆ ಬರ್ತಾರೆ ಅಂತಾರೆ ಸೃಜನ್.
ಯಶ್ ಅವರ ಎಪಿಸೋಡ್ ನೋಡಲು ಅಭಿಮಾನಿಗಳಂತೂ ಕಾತರರಾಗಿದ್ದಾರೆ. ಯಶ್ ಜೊತೆ ರಾಧಿಕಾನೂ ಹೆಜ್ಜೆ ಇಡ್ತಾಳಾ. ತಮ್ಮ ಅಭಿಮಾನಿಗಳನ್ನು ಸಂತಸ ಪಡಿಸ್ತಾರ ಅಂತ ನೋಡಬೇಕು.